ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ ನಿರ್ವಿಘ್ರಂ ಕುರುಮೆ ದೇವ ಸರ್ವ ಕಾರ್ಯೇಷು ಸರ್ವದಾ

Chat Anytime

+91 86184 42321

Call Us Anytime

+91 83109 85923

ಮುನ್ನುಡಿ

ಕ್ಷೇತ್ರ ಪುರೋಹಿತರಾದ ವೇ ಮೂ ಶ್ರೀ ಗವೀಶ ಶಂಕರಲಿಂಗ ಭಟ್, ಗಣಧಾಮ ನಿಲಯ, ಗೋಕರ್ಣ, ಸದಾ ಹಸನ್ಮುಖಿಯಾದ ಇವರು ತಮ್ಮ ಬಾಲ್ಯದಿಂದಲೇ ಎಕಪಾಠಿಯಾಗಿ, ಎಲ್ಲಾ ರೀತಿಯ ಅಧ್ಯಯನ ಅನುಭವ ದೊಂದಿಗೆ ಉತ್ತರ ದಕ್ಷಿಣ ಭಾರತ ಯಾತ್ರೆ ಸುಮಾರು ಹದಿನೈದು ಬಾರಿ ತನ್ನ ಶಿಷ್ಯರೊಂದಿಗೆ ಮುಗಿಸಿ, ಪ್ರಶಸ್ತಿ ಮತ್ತು ಪ್ರಸಿದ್ಧಿಯನ್ನು ಪಡೆದಿರುತ್ತಾರೆ. ಅತಿಥಿ ಸತ್ಕಾರ ದೊಂದಿಗೆ, ಶ್ರೀ ಮಹಾ ಗಣಪತಿ ದೇವಸ್ಥಾನದ ಮುಖ್ಯ ಅಚ೯ಕರಾಗಿ, ಶ್ರೀ ದೇವತಾ ಪೂಜೆಯಿಂದ, ಪೂರ್ವ ಅಪರ ಕಾಯ೯ಕ್ರಮದ ಎಲ್ಲಾ ಶಾಸ್ತ್ರೋಕ್ತ ವಿಧಿ ವಿಧಾನಗಳನ್ನು ತಮ್ಮ ಕುಟುಂಬದವರೊಂದಿಗೆ ಮಾಡಿಕೊಂಡು ಬರುತ್ತಿದ್ದಾರೆ.

ಧಾಮಿ೯ಕ ಪರಂಪರೆಯನ್ನು ಹೊಂದಿದ ಇವರು ತಮ್ಮ ಮಕ್ಕಳನ್ನು "ಶ್ರೀ ಚತುರ್ವೇದ ವಿದ್ಯಾ ಗಣಪತಿ ಪಾಠಶಾಲೆ ಚೆನೈ" ಯಲ್ಲಿ ವೇದಾಧ್ಯಯನ ಮಾಡಿಸುತ್ತಿದ್ದಾರೆ.